ಅಭಿಪ್ರಾಯ / ಸಲಹೆಗಳು

ಹಿನ್ನಲೆ

ಪಿಸಿಕೆಎಲ್‌  ಹಿನ್ನಲೆ

 

ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್(ಪಿಸಿಕೆಎಲ್)‌ ಕುರಿತು:

 

      ರಾಜ್ಯ ಸರ್ಕಾರವು ಏಪ್ರಿಲ್‌ 2007 ರಲ್ಲಿ ಕೆ.ಪಿ.ಸಿ.ಎಲ್‌ ನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಹೆಚ್ಚಳದ ಪ್ರಯತ್ನಗಳಿಗೆ ಪೂರಕವಾಗಿ ವಿಶೇಷ ಉದ್ದೇಶಿತ ವಾಹಕವನ್ನು (ಎಸ್.ಪಿ.ವಿ) ಅಂದರೆ ಪಿ.ಸಿ.ಕೆ.ಎಲ್‌ ಸಂಸ್ಥೆಯನ್ನು ರಚಿಸಲು ಒಪ್ಪಿಗೆ ನೀಡಿತು. ಪಿ.ಸಿ.ಕೆ.ಎಲ್‌ ಸಂಸ್ಥೆಯು ಕಂಪನಿ ಕಾಯ್ದೆ 1956 ರ ಅನುಸಾರ 20 ನೇ ಆಗಸ್ಟ್‌ 2007 ರಂದು ಐದು ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳದೊಂದಿಗೆ  16 ನೇ ಅಕ್ಟೋಬರ್‌ 2007 ರಿಂದ ತನ್ನ ವ್ಯವಹಾರಿಕ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ಎಲ್ಲಾ ಐದು ವಿತರಣಾ ಕಂಪನಿಗಳು ತಲಾ ಒಂದು ಕೋಟಿ ರೂಪಾಯಿಗಳನ್ನು ವಂತಿಕೆ ಕೊಟ್ಟಿದ್ದು ಇದರಲ್ಲಿ ರೂ. 1 (ಒಂದು) ಲಕ್ಷ ರೂಪಾಯಿಗಳ ಈಕ್ವಿಟಿ ಷೇರು ಹಣ ಒಳಗೊಂಡಿರುತ್ತದೆ.

ಭಾರತ ಸರ್ಕಾರದ ವಿದ್ಯುತ್‌ ಮಂತ್ರಾಲಯದ ಕೇಸ್-1 ಮತ್ತು 2 ರ ಬಿಡ್ಡಿಂಗ್‌ ಮಾರ್ಗದರ್ಶಿಗಳನ್ವಯ ನೂತನ ವಿದ್ಯುತ್‌ ಯೋಜನೆಗಳನ್ನು ಬಿಡ್ಡಿಂಗ್‌ ಪ್ರಕ್ರಿಯೆ ಮೂಲಕ ಸ್ಥಾಪಿಸಿ ವಿದ್ಯುತ್‌ ಸಾಮರ್ಥ್ಯ ಹೆಚ್ಚಿಸಲು ಪಿ.ಸಿ.ಕೆ.ಎಲ್‌ ಸಂಸ್ಥೆಯು ಜವಾಬ್ದಾರಿ ಹೊಂದಿರುತ್ತದೆ. ಅಲ್ಪಾವಧಿ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ಸರಿದೂಗಿಸಲು ಪಿ.ಸಿ.ಕೆ.ಎಲ್‌ ಸಂಸ್ಥೆಯು ಎಸ್ಕಾಂಗಳ ಪರವಾಗಿ ವಿವಿಧ ಮೂಲಗಳಿಂದ, ಅಂದರೆ ಇಂಡಿಯನ್‌ ಎನರ್ಜಿ ಎಕ್ಸ್‌ಚೇಂಜ್ ( IEX), ಬ್ಯಾಂಕಿಂಗ್‌ (SWAP) ಮತ್ತು ದ್ವಿಪಕ್ಷೀಯ ವ್ಯವಹಾರಗಳು ಸೇರಿದಂತೆ ವಿವಿಧ ಮೂಲಗಳಿಂದ ವಿದ್ಯುತ್‌ ಖರೀದಿ ಮಾಡಲಾಗುತ್ತಿದೆ. ವಿದ್ಯುತ್‌ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಪಿ.ಸಿ.ಕೆ.ಎಲ್‌ ಸಂಸ್ಥೆಯು, ಇತರೆ (ಹೊರ) ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಅಲ್ಲದೆ ದಕ್ಷಿಣ ಪ್ರಾದೇಶಿಕ ಶಕ್ತಿ ಸಮಿತಿ (SRPC) ಯೊಂದಿಗೆಯೂ ಸಹ ಸಮನ್ವಯಿಸುತ್ತಿದೆ.

 

ಪಿ.ಸಿ.ಕೆ.ಎಲ್ಚಟುವಟಿಕೆಗಳು:

 • ಕೇಸ್-2‌ ಬಿಡ್ಡಿಂಗ್‌ ನ ಮೂಲಕ ವಿದ್ಯುತ್‌ ಖರೀದಿ ಪ್ರಕ್ರಿಯೆಗಳಿಗೆ ಪಿ.ಸಿ.ಕೆ.ಎಲ್‌, ಸಂಯೋಜಕರಾಗಿ (Facilitator) ಕಾರ್ಯ ನಿರ್ವಹಿಸುವುದು.
 • ಎಸ್ಕಾಂಗಳ (ESCOMs) ಪರವಾಗಿ ಅಲ್ಪಾವಧಿಯ ಸಂಗ್ರಹಣೆ ಮತ್ತು ವಿದ್ಯುತ್‌ ಖರೀದಿ ಒಪ್ಪಂದ (PPA) ಗಳ ತಯಾರಿಕೆಗಾಗಿ ವಿದ್ಯುತ್‌ ವ್ಯಾಪಾರಿಗಳು/ ಜನರೇಟರಗಳೊಂದಿಗೆ ಮಾತುಕತೆಗಳು.
 • ಎಸ್ಕಾಂಗಳ ಪಾರವಾಗಿ ದೀರ್ಘಾವಧಿಯಲ್ಲಿ ಕೇಸ್-ಟು-ಕೇಸ್‌ (Case to Case) ಆಧಾರದಲ್ಲಿ ಬೇಡಿಕೆ ಮತ್ತು ಲಭ್ಯತೆಗಳನ್ನು ಅಂದಾಜಿಸುವುದು.
 • ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯಗಳ ಅಡಿಯಲ್ಲಿ ಬರುವ ಸಾಂಪ್ರದಾಯಕ ವಿದ್ಯುತ್‌ ಯೋಜನೆಗಳ ಮತ್ತು ಸ್ವತಂತ್ರ ವಿದ್ಯುತ್‌ ಉತ್ಪಾದಕರರ (ಐಪಿಪಿಗಳ- IPP)ಮತ್ತು ಅಲ್ಟ್ರಾ ಮೆಗಾ ವಿದ್ಯುತ್‌ ಉತ್ಪಾದನಾ ಯೋಜನೆಗಳ (UMPP) ವಿದ್ಯುತ್‌ ಖರೀದಿ ಒಪ್ಪಂದಗಳನ್ನು ತಯಾರಿಸುವುದು ಹಾಗೂ ಸಮಗ್ರ ಪರಿಶೀಲನೆ ಮತ್ತು ಒಪ್ಪಂದಗಳಲ್ಲಿ ಬರುವ ತಾಂತ್ರಿಕ ಮತ್ತು ವಾಣಿಜ್ಯ ವಿಷಯಗಳ ಬಗ್ಗೆ ಇರುವ ಮಾನದಂಡಗಳ ಅನುಸರಣಿಯನ್ನು ಖಚಿತಪಡಿಸಿಕೊಳ್ಳುವುದು.
 • ಎಸ್ಕಾಂಗಳ ವಿದ್ಯುತ್‌ ಖರೀದಿಯ ವೆಚ್ಚ (ದ್ವಿಪಕ್ಷೀಯ ಒಪ್ಪಂದಗಳು ಮತ್ತು ವಿನಿಮಯ ಕೇಂದ್ರ)- (Bilateral & Exchange) ಹಂಚಿಕೆ ಹಾಗೂ ವಿದ್ಯುತ್‌ ನ ಆಮದು/ರಫ್ತುಗಳ ಲೆಕ್ಕಪತ್ರಗಳ ಪರಿಶೀಲನೆ.
 • ಸ್ವತಂತ್ರ ವಿದ್ಯುತ್‌ ಉತ್ಪಾದಕರುಗಳ (IPP)/ ಎಂಓಯು (MoU) ಗಳ ಮತ್ತು ಜಂಟಿ ಉದ್ಯಮ ಯೋಜನೆಗಳ (Joint Venture Project) ವಿದ್ಯುತ್‌ ಖರೀದಿ ಒಪ್ಪಂದದ ಪೂರ್ವ ಹಾಗೂ ನಂತರದ ವಿಷಯಗಳ ಕುರಿತು ಪರಿಶೀಲನೆ.
 • ಎಸ್ಕಾಂಗಳ ಪರವಾಗಿ ದಕ್ಷಿಣ ಪ್ರಾದೇಶಿಕ ಶಕ್ತಿ ಸಮಿತಿ (ಎಸ್.ಆರ್.ಪಿ.ಸಿ- SRPC) ಯಲ್ಲಿ ಪ್ರತಿನಿಧಿಸುವುದು.
 • ಸ್ಪರ್ಧಾತ್ಮಕ ರೀತಿಯಲ್ಲಿ (Competitive Bidding) ವಿದ್ಯುತ್‌ ಖರೀದಿಗೆ ವಿದ್ಯುತ್‌ ಬಿಡ್‌ ದಾಖಲೆಗಳನ್ನು ತಯಾರಿಸುವುದು ಹಾಗು ಇನ್ನಿತರೆ ಪ್ರಾಥಮಿಕ ಚಟುವಟಿಕೆಗಳ ಕುರಿತು ತಯಾರಿಕೆ.

 

 • ಎಸ್ಕಾಂಗಳ ಪರವಾಗಿ ವಿದ್ಯುತ್‌ ವಿನಿಯಮ ಕೇಂದ್ರಗಳಿಂದ ವಿದ್ಯುತ್‌ ಖರೀದಿ ಹಾಗೂ ನಿರ್ವಹಣೆ.
 • ಅಲ್ಪಾವಧಿ/ ಯುಪಿಸಿಎಲ್‌ ವಿದ್ಯುತ್‌ ಖರೀದಿಗಳ ವಿದ್ಯುತ್‌ ಬಿಲ್‌ ಗಳ ಪರಿಶೀಲನೆ.
 • ಸ್ಪರ್ಧಾತ್ಮಕ ರೀತಿಯಲ್ಲಿ (Competitive Bidding) ವಿದ್ಯುತ್‌ ಖರೀದಿಸಲು DEEP e-PORTAL ನಲ್ಲಿ ಅಲ್ಪಾವಧಿ/ ಮಧ್ಯಮಾವಧಿ ಆಧಾರದ ಮೇಲೆ ವಿದ್ಯುತ್‌ ಖರೀದಿಸುವುದು, ಬಿಡ್ಡಿಂಗ್‌ ಪ್ರಕ್ರಿಯೆ ಕೈಗೊಳ್ಳುವುದು.

 

 

 

 

ಇತ್ತೀಚಿನ ನವೀಕರಣ​ : 05-03-2020 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080